Source:https://kannada.gizbot.com/scitech/a-brief-history-artificial-intelligence-ai/articlecontent-pf85804-015101.html
ಮಾನವನ ಬುದ್ಧಿಶಕ್ತಿಯಿಂದಲೇ ಜನ್ಮತಾಳಿದ ಈ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಈಗ ಮಾನವನಿಗೇ ಸವಾಲೆಸೆಯುತ್ತಿದೆ. ಮುಂದಿನ 15 ವರ್ಷಗಳಲ್ಲಿ ಇದು ಮನುಷ್ಯನ ಬುದ್ಧಿಶಕ್ತಿ ಸಾಮರ್ಥ್ಯವನ್ನು ಮೀರಿಸುತ್ತದೆ. ಇನ್ನು 100 ವರ್ಷಗಳಲ್ಲಿ ವಿಶ್ವದ ಒಟ್ಟಾರೆ ಜನರ ಬುದ್ಧಿಶಕ್ತಿಯನ್ನು ಒಟ್ಟುಗೂಡಿಸಿದರೂ ಇದಕ್ಕೆ ಸರಿಸಾಟಿಯಾಗಲಾರದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.!! ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸರಳವಾಗಿ ಹೇಳುವುದಾದರೆ ಇದು ಕೇವಲ ಒಂದು ಕಂಪ್ಯೂಟರ್ ಪ್ರೋಗ್ರಾಮ್. ಆದರೆ, ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ, ಇದು ಸಾಮಾನ್ಯ ಕಂಪ್ಯೂಟರ್ ಪ್ರೋಗ್ರಾಮ್ ಅಲ್ಲ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುವಪ ಪ್ರೋಗ್ರಾಮ್!! ಹಾಗಾದರೆ, ಕೃತಕ ಬುದ್ಧಿಮತ್ತೆ ಇತಿಹಾಸ ಏನು? ಸಾಧಕ ಬಾಧಕಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಹುಟ್ಟಿದ್ದು ಯಾವಾಗ? ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) 1956ರಿಂದಲೇ ಬಳಕೆಗೆ ಬಂದಿದೆ. ಎಲ್‌ಐಎಸ್‌ಪಿ ಎನ್ನುವ ಪ್ರೊಗ್ರಾಮಿಂಗ್ ಲಾಂಗ್ವೇಜ್ ಅಭಿವೃದ್ಧಿಪಡಿಸಿದ ಜಾನ್ ಮೆಕ್‌ಕಾರ್ತಿ ಎನ್ನುವ ವಿಜ್ಞಾನಿ ಇದಕ್ಕೆ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಎಂಬ ಹೆಸರನ್ನು ಸೂಚಿಸಿದರು.!!
ಪ್ರಚಲಿತವಾಗಿದ್ದು ಚೆಸ್‌ನಿಂದ!! ಮಾನವನನ್ನು ಬಿಟ್ಟರೆ ಇತರರಿಂದ ಚೆಸ್ ಆಡಲು ಸಾಧ್ಯವೇ ಇಲ್ಲ ಎನ್ನುವ ಕಾಲದಲ್ಲಿ ಐಬಿಎಂನ ‘ಡೀಪ್ ಬ್ಲೂ' ಸೂಪರ್ ಕಂಪ್ಯೂಟರ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ವಿಶ್ವ ಚೆಸ್ ಚಾಂಪಿಯನ್ ಆಗಿದ್ದ ಗ್ಯಾರಿ ಕಾಸ್ಪೆರೆಸೊ ಅವರನ್ನು ಸೋಲಿಸಿತು. ಈ ಘಟನೆ ನಂತರ ಕೃತಕ ಬುದ್ಧಿಮತ್ತೆಯ ಶಕ್ತಿ ಏನೆಂಬುದು ವಿಶ್ವಕ್ಕೆ ತಿಳಿಯಿತು.!!
ನಮಗೆ ಅರಿವಿಲ್ಲದಂತೆಯೇ ಹಾಸುಹೊಕ್ಕಾಗಿದೆ.!! ನಮ್ಮ ಆಲೋಚನೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾದ ಕೆಲಸಗಳನ್ನು ಮಾಡುತ್ತಿರುವ ಇವೆಲ್ಲಾ ಕೃತಕ ಬುದ್ಧಿಮತ್ತೆಯ ರೂಪಗಳೇ. ಹೀಗೆ ನಮಗೆ ಅರಿವಿಲ್ಲದಂತೆ ಇದು ನಮ್ಮ ಜೀವನಕ್ಕೆ ಕಾಲಿಟ್ಟಿದೆ. ಯಾವುದಾದರೂ ಮಾಹಿತಿಗಾಗಿ ಗೂಗಲ್‌ನಲ್ಲಿ ಎರಡು ಅಕ್ಷರಗಳನ್ನು ಟೈಪ್ ಮಾಡುತ್ತಿದ್ದಂತೇ ನಾವು ಏನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಊಹಿಸಿಸುವುದು ಇದರಿಂದಲೇ.!!
'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ವಿಶೇಷವೇನು? ವೈದ್ಯ, ವಿಜ್ಞಾನ, ವಾಣಿಜ್ಯ, ಸೇನೆ, ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇದರದ್ದೇ ಮೇಲುಗೈ.!! ಸ್ವಯಂಚಾಲಿತ ವಾಹನ, ಯಂತ್ರಗಳು, ಚಾಟ್‌ಬೋಟ್ಸ್, ಪರ್ಸನಲ್ ಡಿಜಿಟಲ್ ಅಸಿಸ್ಟಂಟ್ ಎಲ್ಲವೂ ಕೂಡ 'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ವಿಶೇಷತೆಗಳೆ.! ಸ್ವಯಂ ಆಗಿ ಕಲಿಯುವ ಯಂತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಕೆಲಸ ನಿರ್ವಹಿಸಲಿದ್ದು, ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರೋಗ್ರಾಮಿಂಗ್ ಮಾಡಿಕೊಂಡು ಅದರ ಅಧಾರವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೆಲಸ ಮಾಡುತ್ತದೆ!
'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಪರಿಣಾಮಗಳೇನು? ಮಾನವನ ಕೆಲಸ ಮತ್ತು ಜೀವನವನ್ನೇ ಬಹಳ ಸುಲಭಗೊಳಿಸುವ ಈ ಕೃತಕ ಬುದ್ಧಿಮತ್ತೆ ಮಾನವನ ಒಳಿತಿಗೆ ಕಾರಣವಾಗಬಲ್ಲದು.! ಆದರೆ, ಇದೇ ವಿಜೃಂಭಿಸಿದರೆ ಹಲವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.! ಭಯೋತ್ಪಾದಕರು, ಕಳ್ಳರು ದುರುದ್ದೇಶಗಳಿಗೆ ಇದರ ಶಕ್ತಿಯಿಂದ ಕೆಲಸ ಮಾಡುವ ಸ್ವಯಂಚಾಲಿತ ಯಂತ್ರಗಳು ಸಿಕ್ಕರೆ ಆಗಬಹುದಾದ ಪರಿಣಾಮಗಳನ್ನು ಸಹ ಯೋಚಿಸಬೇಕಿದೆ.!!